`ಸಿದ್ಲಿಂಗು` ಚಿತ್ರಕ್ಕೆ ಹಿನ್ನಲೆ ಸಂಗೀತ
Posted date: 19 Mon, Dec 2011 ? 06:12:51 PM

ಸ್ಯಾಮಿ ಅಸೋಸಿಯೋಟ್ಸ್ ಲಾಂಛನದಲ್ಲಿ ಟಿ.ಪಿ.ಸಿದ್ದರಾಜು ನಿರ್ಮಿಸುತ್ತಿರುವ ‘ಸಿದ್ಲಿಂಗು ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಅಳವಡಿಸಲಾಗುತ್ತಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದೆ.
    ಮೈಸೂರು, ಬೆಂಗಳೂರು, ತಲಕಾಡು ಮುಂತಾದ ಕಡೆ ಚಿತ್ರೀಕರಣ ನಡೆದಿದೆ ಎಂದು ನಿರ್ದೇಶಕ ವಿಜಯಕುಮಾರ್ ತಿಳಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ.    
     ಯೋಗೀಶ್ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ರಮ್ಯಾ. ಅಚ್ಯುತರಾವ್, ಗಿರಿಜಾಲೋಕೇಶ್, ರೇಣುಕಾರಾಧ್ಯ ಗಿರಿಜಾಲೋಕೇಶ್, ರಂಗಾಯಣರಘು, ಶರಣ್, ಎಚ್.ಎಮ್.ಟಿ ವಿಜಯ್, ಕೆ.ಸಿ.ಶ್ರೀಧರ್, ವತ್ಸಲಾ ಮೋಹನ್ ಮುಂತಾದವರು  ಚಿತ್ರದ ತಾರಾಬಳಗದಲ್ಲಿದ್ದಾರೆ.
    ಜ಼್ಞಾನಮೂರ್ತಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ  ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.  ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನವಿರುವ ‘ಸಿದ್ಲಿಂಗು ಚಿತ್ರಕ್ಕೆ  ಉದಯ ಹೆಗಡೆ ಅವರ ಸಂಕಲನವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed